Oct 5, 2009

ನನ್ನದೊಂದು.........!

ನಿನ್ನ ಕಣ್ಣ ತುದಿಯಲ್ಲಿ,

ನನ್ನದೊಂದು ಚಿತ್ರವಿರಲಿ ಗೆಳತಿ....

ಯಾವತ್ತಾದರೂ ಕಣ್ಣೀರು ಕದಲಿದರೆ,

ಅವು ಕೆನ್ನೆಗೆ ಧುಮುಕಿ,

ನಿನ್ನ ಸೌಂಧರ್ಯ ಹಾಳು ಮಾಡದಂತೆ,

ನನ್ನ ಚಿತ್ರವಾದರೂ ತಡೆದೀತು......



ನಿನ್ನ ಮೆದು ಮನಸ್ಸಿನಲ್ಲಾದರೂ,

ನನ್ನದೊಂದು ತುಂಟ ನೆನಪಿರಲಿ ಗೆಳತಿ......

ಎಂದಾದರೂ ನಿನ್ನ ಮನ ಮುದುಡಿದರೆ,

ನನ್ನ ತುಂಟತನ ನೆನಪಾಗಿ,

ನೋವು ನಿನ್ನ ಮನ ಘಾಸಿ ಮಾಡದಂತೆ,

ನನ್ನ ನೆನಪಾದರೂ ತಡೆದೀತು........



12 comments:

  1. Nimma kavanada kanasu GELATI
    kanasalloo oLitannu bayasuva..avaLa nOvannu shataaya gataaya toDeyuva nimma bhaavagala hotta kavana cannaagi moodide..

    ReplyDelete
  2. ದಿನಕರ್ ಸರ್,

    ಎಂಥ ಅದ್ಭುತ, ರೊಮ್ಯಾಂಟಿಕ್ ಕಲ್ಪನೆ ಸರ್..!

    ಮೊದಲ ಪದ್ಯವಂತೂ ತುಂಬಾ ಇಷ್ಟವಾಯಿತು.

    ReplyDelete
  3. ಮನಸು ಮೇಡಂ,
    ಇದನ್ನ ನಾನು ಬರೆದು ಅಲ್ಲ್ಮೊಸ್ಟ್ ಹತ್ತು ವರ್ಷವಾಗಿರಬೇಕು.... ಈಗ ಬ್ಲಾಗ್ನಲ್ಲಿ ಪ್ರಕಟಿಸಿದ್ದೇನೆ .... ಇಸ್ತಪತ್ತಿದ್ದಕ್ಕೆ ಧನ್ಯವಾದ....

    ಬಿರಾದಾರ್ ಸರ್,
    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....

    ಜಲನಯನ ಅವರೇ ,
    ಕಾಮೆಂಟಿಸಿದ್ದಕ್ಕೆ ಧನ್ಯವಾದ,


    ಶಿವೂ,
    ರೋಮ್ಯಾಂಟಿಕ್ ಕಲ್ಪನೆ ನಿಜ, ನನ್ನ ಹೆಂಡತಿ ನನ್ನ ಹಿಂದೆ ನಿಂತು ' ಯಾರ ಬಗ್ಗೆ ಬರೆದಿದ್ದು ' ಅಂತ ಕಣ್ಣಲ್ಲೇ ಕೇಳುತ್ತಿದ್ದಾಳೆ....

    ಶಿವಪ್ರಕಾಶ್,
    ಥ್ಯಾಂಕ್ಸ್........ ಓದಿ, ಅಭಿಪ್ರಾಯ ಪಟ್ಟಿದ್ದಕ್ಕೆ....

    ReplyDelete
  4. ಪ್ರೇಮವನ್ನು
    ಹೃದಯದೊಳಗೆ..
    ಬಚ್ಚಿಟ್ಟು...
    ನಲ್ಲೆಯ
    ಮನದೊಳಗಿರುವ..
    ಕನಸು...
    ಆಸೆ...

    ದಿನಕರ ..
    ತುಂಬಾ ಸೊಗಸಾಗಿದೆ..
    ಭಾವಗಳು ತುಂಬಾ ಇಷ್ಟವಾದವು....

    ReplyDelete
  5. ದಿನಕರ್,
    ಗೆಳತಿಗೆ ನೋವೆ ಆಗದಂತೆ ಕಾಯುವ ಭಾವಗಳು ಸೊಗಸಾಗಿವೆ...

    ReplyDelete
  6. ದಿನಕರ್ ಅವರೇ...

    ಪ್ರೀತಿಯ ಸೆಲೆ ತು೦ಬಿರುವ ಇ೦ತಹ ಕವನಗಳೆ೦ದರೆ ನನಗೆ ತು೦ಬಾ ಇಷ್ಟ... ತು೦ಬಾ ಒಳ್ಳೆಯ ಆಶಯ ತು೦ಬಿದೆ ಅದರಲ್ಲಿ.... ಇ೦ತಹ ಕವನಗಳೂ ಇನ್ನೂ ಇನ್ನೂ ಬರಲಿ....

    ReplyDelete
  7. ದಿನಕರ ಅವ್ರೆ..,

    ನಿಮ್ಮ ಕಾಳಜಿ ಕಲ್ಪನೆಯಲ್ಲಿ ತುಂಬಾ ಚೆನ್ನಾಗಿ ವ್ಯಕ್ತವಾಗಿದೆ..

    ---ಎ.ಕಾ.ಗುರುಪ್ರಸಾದಗೌಡ.,:www.balipashu.blogspot.com.; hanebaraha@gmail.com.

    ReplyDelete
  8. ಗೌತಮ ಹೆಗಡೆಯವರೇ,
    ತುಂಬಾ ಧನ್ಯವಾದ ಮೆಚ್ಹಿ ಕಮೆಂಟಿಸಿದ್ದಕ್ಕೆ...

    ಪ್ರಕಾಶ್ ಸರ್,
    ನಿಮ್ಮಂತವರು ಮೆಚ್ಹಿ ಪ್ರೋತ್ಸಾಹಿಸಿದರೆ ತುಂಬಾ ಉತ್ಸಾಹ ಮೂಡುತ್ತದೆ....

    ಮಹೇಶ್ ಸರ್,
    ತುಂಬಾ ಧನ್ಯವಾದ, ಗೆಳತಿಯ ನೋವು ನಮ್ಮದೇ ಅಲ್ಲವೇ....

    ಪ್ರೀತಿಯ ಸುಧೇಶ್,
    ನಂಗೊತ್ತು, ನಿಂಗೆ ಗೆಳತಿಗೆ ನೋವು ಮಾಡೋದು ಇಷ್ಟ ಇಲ್ಲ ಅಂತ.....

    ಗುರುಪ್ರಸಾದ್ ಸರ್,
    ನನ್ನ ಬ್ಲಾಗ್ ಗೆ ಸ್ವಾಗತ .... ಹೀಗೆ ಬರುತ್ತಿರಿ..... ಪ್ರತಿಕ್ರೀಯೆಗೆ ಧನ್ಯವಾದಗಳು...

    ReplyDelete