Sep 30, 2009

ನಾನೂ...... ನನ್ನಪ್ಪ......

ಅಸಹಾಯಕತೆ ಇದೆ...
ಆರೋಗ್ಯವೂ ಕೈಕೊಡುತ್ತಿದೆ...
ಅಸಹನೆ ಮೂಡುತ್ತಿದೆ...
ಹೇಳಿದ್ದನ್ನೇ ಪದೇ ಪದೇ ಹೇಳುತ್ತಾರೆ....

ಹೌದು, ಅಪ್ಪನಿಗೆ ವಯಸ್ಸಾಗುತ್ತಿದೆ.....

ಎಲ್ಲವನ್ನೂ ಸಹಿಸಿಕೊಳ್ಳಬೇಕು....
ಅವರಿಗೆ ನಾನೇ ಹೆಗಲಾಗಬೇಕು...
ನಾನೇ ಸಹನೆ ಬೆಳೆಸಿಕೊಳ್ಳಬೇಕು....
ಅವರಿಗೆ ನಾನೇ ಕಿವಿಯಾಗಬೇಕು.....

ಯಾಕೆಂದರೆ, ನಾನೂ ಅಪ್ಪನಾಗುತ್ತೇನೆ..
ನಾಳೆ, ನನಗೂ ವಯಸ್ಸಾಗುತ್ತದೆ......

12 comments:

  1. ನನಗೆ ಬಹಳ ದಿನಗಳ ಹಿಂದೆ ಒಂದು Mail ಬಂದಿತ್ತು.
    ತಂದೆ ಹಾಗು ಮಗನ ಮೇಲೆ. ಅದನ್ನು ನೀವು ಓದಿರಬಹುದು.
    ನಿಮ್ಮ ಈ ಲೇಖನ ಓದಿ, ನನಗೆ ಆ Mail ನೆನಪಾಯಿತು.
    ನನ್ನ inbox ನಲ್ಲಿ ಹುಡುಕಾಡಿದೆ. ಸಿಗಲಿಲ್ಲ. ನಂತರ ಗೂಗಲ್ ಸರ್ಚ್ ಮಾಡಿ.. ಎಲ್ಲೋ ಒಂದು ಬ್ಲಾಗಿನಲ್ಲಿ ಬರೆದ ಅದೇ ಸ್ಟೋರಿಯ ಲಿಂಕ್ ನಿಮಗೆ ಕೊಡುತ್ತಿದ್ದೇನೆ.
    ನೀವು ಓದಿರದಿದ್ದರೆ, ಇದು ನಿಮಗೆ ಇಷ್ಟವಾಗಬಹುದು.
    http://thoughtsofammar.blogspot.com/2009/02/story-of-father-and-his-son.html

    This story is one of my favorite.

    ReplyDelete
  2. ಶಿವಪ್ರಕಾಶ್,
    ಕನ್ನಡದಲ್ಲಿ ಈ ಕಥೆಯನ್ನು ಎಲ್ಲೋ ಪೇಪರಲ್ಲಿ ಓದಿದ್ದೆ,
    ನನ್ನ ತಂದೆ ನನ್ನ ಮನೆಗೆ ಬಂದಿದ್ದಾರೆ , ಅವರಿಗೆ ಸ್ವಲ್ಪ ಆರೋಗ್ಯ ಸರಿ ಇಲ್ಲ..... ನಮಗೆಲ್ಲ ಮಾದರಿಯಾಗಿ, ಸ್ಫೂರ್ತಿ ತುಂಬುತ್ತಿದ್ದ ಅಪ್ಪ ಈಗ ಕೊಂಚ ಮಂಕಾಗಿದ್ದಾರೆ.... ತುಂಬಾ ಬೇಸರದಿಂದ ಇದ್ದೆ, ಈ ಕವನ ಬರೆದೆ, ನಮ್ಮ ನೆನಪನ್ನು ಕಲಕಿದೆ... ಓದಿ ಮೆಚಿದ್ದಕ್ಕೆ, ಧನ್ಯವಾದಗಳು...

    ReplyDelete
  3. ದಿನಕರ...

    ಸೊಗಾಸಾಗಿದೆ...
    ಬಹಳ ಆಪ್ತವಾಗಿದೆ..
    ವಾಸ್ತವತೆಯನ್ನು ಬಿಚ್ಚಿಟ್ಟಿದ್ದೀರಿ...

    ನಿಮ್ಮೊಳಗಿನ ಕವಿ ನಮಗೆಲ್ಲ ಇಷ್ಟವಾಗಿ ಬಿಡುತ್ತಾನೆ...

    ಅಭಿನಂದನೆಗಳು...

    ReplyDelete
  4. ಪ್ರಿಯ ದಿನಕರ್‍, ನಮಸ್ಕಾರಗಳು. ಇಮ್ಮ ಬರಹ ಚೆನ್ನಾಗಿದೆ... ನಿಜ ನಾವು ಕೂಡ ಆ ಹಂತಕ್ಕೆ ಹೋಗಲೇ ಬೇಕಲ್ಲವೇ.... ಅದೇ ವಾಸ್ತವ
    ಹಾಗೂ ನನ್ನ ಬರಹ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ReplyDelete
  5. ನನ್ನ ಬ್ಲಾಗಿಗೆ ಬಂದು ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ. ಅಂದಹಾಗೆ ನಿಮ್ಮ ಅಪ್ಪ ಕವನ ಚನ್ನಾಗಿದೆ.

    ReplyDelete
  6. ಪ್ರಕಾಶಣ್ಣ,
    ತುಂಬಾ ಥ್ಯಾಂಕ್ಸ್... ಓದಿ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ... ನಿಮಗೆ ಇಷ್ಟವಾದರೆ ನನಗೆ ಅದೇ ಸಂತೋಷ.....

    ಜಿತೇಂದ್ರ ಹಿಂದುಮನೆ ಯವರೇ...
    ಧನ್ಯವಾದಗಳು ನನ್ನ ಬ್ಲಾಗ್ ಗೆ ಬಂದು ಕಾಮ್ಮೆನ್ತಿಸಿದ್ದಕ್ಕೆ....

    ಉದಯ್ ಸರ್,
    ಥಾಂಕ್ ಯು ಸರ್.....

    ReplyDelete
  7. ದಿನಕರ್ ಸರ್,
    ನಮಸ್ಕಾರ, ಸರ್ ಇಷ್ಟು ದಿನ ನಿಮ್ಮ ಬ್ಲಾಗ್ನಲ್ಲಿ ಕಾಮೆಂಟ್ ಹಾಕಲು ಪ್ರಯತ್ನ ಪಟ್ಟು ಸುಮ್ಮನಾಗಿದ್ದೆ... ಇಂದು ಕಾಮೆಂಟ್ ಹಾಕಲು ಸಾಧ್ಯವಾಗಿದೆ...
    ನಿಮ್ಮ ಕವನ ತುಂಬಾನೇ ಇಷ್ಟವಾಯಿತು...ಅಪ್ಪನ ಮೇಲಿನ ಕಾಳಜಿ ಎದ್ದು ಕಾಣುತ್ತೆ...ಅಪ್ಪಂದಿರೇ ಹಾಗೆ ಅಲ್ಲವೆ ಅವರು ನಮಗೆ ದಾರಿದೀಪ.
    ಮತ್ತಷ್ಟು ಬರೆಯಿರಿ
    ವಂದನೆಗಳು

    ReplyDelete
  8. ದಿನಕರ್ ಸರ್,

    ಪದ್ಯ ಚುಟುಕಾಗಿದ್ದರೂ ಅರ್ಥಪೂರ್ಣವಾಗಿದೆ. ನಮ್ಮ ಬೆನ್ನನ್ನು ನಾವೇ ನೋಡಿಕೊಳ್ಳುವುದು ಹೀಗೇನಾ?

    ಎಲ್ಲರಿಗೂ ಅನ್ವಹಿಸುವ ವಿಚಾರವಿದು...

    ReplyDelete
  9. ಮನಸು ಮೇಡಂ,
    ತುಂಬಾ ಧನ್ಯವಾದ, ನಿಮಗೆ ಇಸ್ತವಾಗಿ, ಕಾಮೆಂಟಿಸಿದ್ದಕ್ಕೆ..... ಅಪ್ಪ ನನಗೆ ಆದರ್ಶ.... ಅವರ ಎಲ್ಲ ಗುಣ ನನಗೆ ಬಂದಿದೆ ಅಂತ ಎಲ್ಲರೂ ಹೇಳುತ್ತಾರೆ....

    ಶಿವೂ ಸರ್,
    ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....

    ReplyDelete
  10. :):) neevu tumba saralavaagi haagu chendage bareyutteeri sir.

    ReplyDelete
  11. ತು೦ಬಾ ತು೦ಬಾ ಇಷ್ಟ ಆಯಿತು ಈ ಕವನ ದಿನಕರ್ ಅವರೇ....

    ReplyDelete
  12. houdu Dinaker..monne nimma hatra hechge maathaadakke aaglilla.. matte serona!

    ReplyDelete