Nov 27, 2009

'' ಪಾರಿವಾಳಗಳು''

'' ಆಹಾ, ಎಷ್ಟು ಪ್ರಶಾಂತವಾದ ಪರಿಸರ ಆಲ್ವಾ'' ಎನಿಸಿತು ಬಸ್ಸಿಳಿದ ಕೂಡಲೇ..... ಬಸ್ಸಿನಿಂದ ಇಳಿದು ನನ್ನ ಫ್ರೆಂಡ್ ಮನೆಗೆ ಹೊರಟಿದ್ದೆವು ನಾನು ಮತ್ತು ನನ್ನ ಸೀನಿಯರ್...... ಹಳ್ಳಿ ನೋಡದೆ ಇರದಿದ್ದರಿಂದ ತಾನೂ ಬರುತ್ತೇನೆ ಅಂದ..... ಸರಿ ಬಾ ಅಂತ ಕರೆದುಕೊಂಡು ಹೊರಟಿದ್ದೆ..... ಕಾಲೇಜಿನಲ್ಲಿ ತುಂಬಾ show off ಮಾಡ್ತಿದ್ದ..... ಬೆಂಗಳೂರಿವನಾದ್ದರಿಂದ ಸ್ವಲ್ಪ ಫಾಸ್ಟ್, ಸ್ವಲ್ಪ take it easy fellow ..... ಅವನಿಗೆ ಹಳ್ಳಿಯ ಪರಿಸರ ನೋಡಿ ತುಂಬಾ ಖುಷಿಯಾಗಿತ್ತು....ವಟ ವಟ ಮಾತಾಡುತ್ತಿದ್ದ.... ' ಏನ್ ಗಾಳಿ ಗುರೂ, ಸಕತ್ತಾಗಿದೆ..... ಎಲ್ ನೋಡಿದರೂ ಹಸಿರು.... ತಂಪು.... ತಂಪು.... ನಮ್ ಬೆಂಗಳೂರಿನಲ್ಲಿ ಇದೆಲ್ಲಾ ಇಲ್ಲ.... ' ಎನ್ನುತ್ತಲೇ ಇದ್ದವನು ಪ್ಲೇಟ್ ಬದಲಾಯಿಸಿದ ' ಆದರೂ ನಮ್ಮ ಬೆಂಗಳೂರೇ ಬೆಸ್ಟ್, ಸಂಜೆಯಾದರೆ ಪಾರಿವಾಳ ( ಹುಡುಗಿಯರು) ಬರತ್ತೆ, ಹೋಗಿ ನಿಂತರೆ ಕಣ್ಣೆಲ್ಲಾ ತಂಪಾಗತ್ತೆ '' ಎಂದೆಲ್ಲಾ ಬಡಬಡಿಸುತ್ತಿದ್ದ..... ನಾನು ಮಾತ್ರ ನಮ್ಮನ್ನು ಕರೆದುಕೊಂಡು ಹೋಗಲು ಬರಬೇಕಿದ್ದ ಫ್ರೆಂಡ್ ಹುಡುಕುತ್ತಿದ್ದೆ..... ನಿರ್ಜನ ಹಳ್ಳಿ ರಸ್ತೆಯಾಗಿತ್ತು.... ಕೆಲವೊಂದು ಹೈ ಸ್ಕೂಲ್ ಹುಡುಗಿಯರು ಬಸ್ಸಿಳಿದು ನಮ್ಮೆದುರಿಗೆ ಹೋದರು.... ಅವರನ್ನು ಕೇಳೋಣವೆಂದರೆ ಮನಸ್ಸಾಗಲಿಲ್ಲ.... ಹಳ್ಳಿ ಹುಡುಗಿಯರು ಬೇರೆ, ತುಂಬಾ ಸೂಕ್ಷ್ಮ ಆಲ್ವಾ... ತಪ್ಪು ತಿಳಿದಾರು ಎಂದು ಸುಮ್ಮನಿದ್ದೆ.... ನನ್ನ ಜೊತೆ ಬಂದ ಬಡ ಬಡ ಪೆಟ್ಟಿಗೆ ಸುಮ್ಮನಿರಬೇಕಲ್ಲ.....'' ಏನ್ ಪಾರಿವಾಳ ಲೇ'' ಅಂದ.... ಹುಡುಗಿಯರಿಗೆ ಅದರ ಅರ್ಥ ತಿಳಿಯದೆ ಸುಮ್ಮನೆ ಹೊರಟು ಹೋದರು.... ಮನಸ್ಸಲ್ಲೇ ನಾನು ' ಇವ ಯಾರಿಗಾದರು ಹೊಡೆಸುತ್ತಾನೆ' ಎಂದುಕೊಂಡೆ.... ಎದುರಿಗೆ ಹೇಳುವ ಹಾಗಿರಲಿಲ್ಲ , ಎಷ್ಟಾದರೂ ನನ್ನ ಸೀನಿಯರ್ ಆಲ್ವಾ ಸಹಿಸಿಕೊಂಡೆ....

ಸ್ವಲ್ಪ ಹೊತ್ತಿನಲ್ಲೇ ನನ್ನ ಫ್ರೆಂಡ್ ಬಂದ.... ಲೇಟ್ ಆಗಿ ಬಂದ ತಪ್ಪಿಗೆ ಅರ್ಚನೆಯನ್ನೂ ಮಾಡಿಸಿಕೊಂಡ.... ನನ್ನ ಸೀನಿಯರ್ ಮಾತ್ರ 'ಏನ್ ಗುರೂ, taxi ಏನು ಸಿಗಲ್ವಾ ಇಲ್ಲಿ,' ಅಂದ..... '' ಇಲ್ಲಾ , ಇಲ್ಲಿ ಕಾರ್ ಬದಲಿಗೆ ಕಾಲೇ ಗತಿ'' ಎಂದ ನನ್ ಫ್ರೆಂಡ್.......... ಸುಮಾರು ದೂರ ನಡೆದು ನನ್ನ ಕಾಲು ನೋಯುತ್ತಿತ್ತು.... ' ಎಲ್ಲೋ ನಿನ್ನ ಮನೆ ' ಎಂದೇ.... ' ಅಲ್ನೋಡು ಒಂದು ಬಾವಿ ಕಾಣ್ತಾ ಇದೆಯಲ್ಲ, ಅದರ ಹಿಂದೇನೆ ನನ್ನ ಮನೆ' ಎಂದ...... ' ಅಂತೂ ಬಂತಲ್ಲಾ ಮನೆ ಎಂದುಕೊಳ್ಳುತ್ತಿರುವಾಗಲೇ.... ಬಾವಿಯಲ್ಲಿ ನೀರು ಸೇದುತ್ತಿರುವ ಹುಡುಗಿ ಕಂಡಳು.... ಎಲ್ಲಾ ಹಳ್ಳಿ ಹುಡುಗಿಯರ ಹಾಗೆ ಮುದ್ದಾಗಿ ಇದ್ದಳು..... ನನ್ನ ಫ್ರೆಂಡ್ ಏನೋ ಹೇಳಲು ಬಾಯಿ ತೆರೆಯೋದಕ್ಕೂ..... ನನ್ನ ಸೀನಿಯರ್ '' ಏನ್ ಗುರೂ, ಪಾರಿವಾಳ ಸಕತ್ತಾಗಿದೆ'' ಎನ್ನುವುದಕ್ಕೂ ಸರಿ ಹೋಯ್ತು..... ಏನೋ ಹೇಳಲು ಹೊರಟ ನನ್ ಫ್ರೆಂಡ್ ಹಾಗೆ ಬಾಯಿ ಮುಚ್ಚಿದ ..... ಪುಣ್ಯಾತ್ಮ ಮಾತ್ರ '' ನಿಮ್ಮೂರಲ್ಲೂ ಪಾರಿವಾಗಳು ಸಕತ್ತಾಗಿದೆಯಮ್ಮಾ , ಹಳ್ಳಿಯ ಗಾಳಿ ನೀರು ಕುಡಿದು ಪೊಗರು ಬಂದಿರತ್ತೆ ಆಲ್ವಾ …. ಯಾವಾಗಲಾದರು ಕಾಳು ಹಾಕಲು try ಮಾಡಿದ್ದೆಯಾ ’’ ಅಂದ ….. ನನ್ನ ಫ್ರೆಂಡ್ ನಗಾಡಲು ಶುರು ಮಾಡಿದ …. ನನಗೆ ಅರ್ಥ ಆಗಲಿಲ್ಲ ….ನಾನು ಅವನನ್ನ ಯಾಕೆ ಎಂದು ಸಂಜ್ಞೆ ಮಾಡಿ ಕೇಳಿದೆ ….. ಅವನು ನನ್ನನ್ನು ಬಡಿದೆ ಕರೆದು ‘’ ಹುಡುಗಿಯನ್ನು ಸರಿಯಾಗಿ ನೋಡಿಕೋ , ಮುಂದಿದೆ ಮಜಾಎಂದ ….. ನನಗೆ ತಲೆ ಬುಡ ಅರ್ಥ ಆಗ್ಲಿಲ್ಲ.....ಆದರೂ ಹುಡುಗಿಯನ್ನು ನೋಡುತ್ತಾ ಗೆಳೆಯನ ಮನೆ ಒಳಗೆ ಹೋದೆ..... ನನ್ನ ಸೀನಿಯರ್ ಆಗಲೇ '' ಏನು fan ಇಲ್ವಾ , T. V . ಇಲ್ವಾ '' ಅಂತೆಲ್ಲಾ ಶುರು ಮಾಡಿದ್ದ..... ' ತುಂಬಾ ಸುಸ್ತಾಗಿದೆ ಏನಾದರು ಕುಡಿಯಲು ತಾರೋ' ಎಂದೆ...... '' ಪಾನೀಯ ಮಾಡಿಸಿದ್ದೇನೆ ತರಿಸುತ್ತೇನೆ ತಡಿ' ಎಂದು ''ರೂಪಾ '' ಎಂದು ಯಾರನ್ನೋ ಕರೆದ..... ಒಳಗಡೆಯಿಂದ ಕೈಯಲ್ಲಿ ಪ್ಲೇಟ್ ಹಿಡಿದು, ಮೂರು ಲೋಟ ಪಾನೀಯ ತರುತಿದ್ದಳು ಒಬ್ಬಳು ಹುಡುಗಿ...... ನಾನು ಸರಿಯಾಗಿ ಗಮನಿಸಿದೆ, ನಾವು ಬರುವಾಗ ಬಾವಿಯಲ್ಲಿ ನೀರು ಸೇದುತ್ತಿದ್ದ ಹುಡುಗಿ ಇವಳೇ ಆಗಿದ್ದಳು..... ನನ್ನ ಸೀನಿಯರ್ ಆಗಲೇ ನನ್ನ ತಿವಿಯಲು ಶುರು ಮಾಡಿದ್ದ...... ಏನೋ ಹೇಳುವವನೂ ಇದ್ದ..... ಅಷ್ಟರಲ್ಲಿ ನನ್ನ ಫ್ರೆಂಡ್ '' ಇವಳು ರೂಪಾ , ನನ್ನ ಒಬ್ಬಳೇ ತಂಗಿ'' ಎಂದ...... ನನ್ನ ಸೀನಿಯರ್ ಮುಖ ನೋಡುವ ಹಾಗಿತ್ತು...........

Nov 20, 2009

ಮತ್ತೆ ನಿನ್ನದೇ ಸುದ್ದಿ......


ಎಲ್ಲಿದ್ದೀಯಾ........?

ಮುಂಜಾನೆಯ ಮಂಜು ಕೂಡ,
ನಿನ್ನ ದಾರಿ ಕಾಯುತ್ತದೆ....
ನಿನ್ನ ಪಾದ ಸೋಕಿ,
ಧರೆಗುರುಳಿ ಇಂಗುತ್ತದೆ.....

ಕಾಯುತ್ತದೆ ಕನಸು ಕೂಡ,
ನೀ ಕೊಡುವ ಕಚಗುಳಿ .....
ನಿನ್ನ ಮನದ ಮನಸ ಕೂಡಿ,
ಉದಯರಾಗ ಹಾಡುತ್ತದೆ.....

ಹುಣ್ಣಿಮೆಯ ಚಂದ್ರ ಕೂಡ,
ನಿನ್ನ ಕ್ಷೇಮ ಬಯಸುತ್ತದೆ ......
ಬೆಳದಿಂಗಳೂ ಸಹ ಹಾಲಾಗಿ,
ನಿನ್ನ ನೆರಳಾಗುತ್ತದೆ.....

ನಿನ್ನ ಮೈಯ ಘಮವು ಕೂಡ ,
ನಿನ್ನ ಸುಳಿವು ಕೊಡುತ್ತದೆ.....
ಮನದ ಮೂಲೆಯನ್ನು ಕೆಣಕಿ,
ದಣಿದ ದೇಹ ತಣಿಸುತ್ತದೆ......




Nov 9, 2009

ನನ್ನ ಚಿತ್ತ.............!



ಅಲೆಗಳಿಗೇಕೆ
ತಿಳಿದಿಲ್ಲ ನೀ ನನ್ನುಸಿರು,
ಪದೇ ಪದೇ ಅಳಿಸುತ್ತವೆ ನಾ ಬರೆದ ಹೆಸರು.....
ಅವುಗಳು ಅಳಿಸುವುದು ನಿನ್ನ ಹೆಸರು ಮಾತ್ರ,
ಮುಟ್ಟಲಾರವು ಅವು ನನ್ನೆದೆಯೊಳಗಿನ
ಚಿತ್ರ.......


ನೀ ನನಗೆ ಪೌರ್ಣಮಿಯ ಬೆಳದಿಂಗಳಂತೆ,
ಕೈಚಾಚಿದರೂ ನಾ, ಸಿಗದೆನಗೆ ನಿನ್ನಯ ನೆರಳು....
ನೀ ನನಗೆ ಮುಗಿಲ ಮಲ್ಲಿಗೆಯಂತೆ,
ನೆನಪು ಘಮ್ಮೆಂದರೂ, ಸಿಗದೆನಗೆ ನಿನ್ನಯ ಬೆರಳೂ ......


ಮುನಿಸಿ ನಡೆದ ಒಡತಿ ಹೊರಟು ಬಾ ಬೇಗ,
ಕಾಯುವುದೇ ಕಾಯಕ ಆಗಿದೆ ನನಗೀಗ.....
ನೀ ಕೊಟ್ಟ ಪ್ರೀತಿ ಸಾಕು ಪೂರ್ತಿ ಜನ್ಮಕ್ಕೆ,
ನೀ ತಿರುಗಿ ಬಂದ ದಿನ ಮುಕ್ತಿ ಜೀವಕ್ಕೆ.......